ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ, 1999 ಕರ್ನಾಟಕದ 224 ಅಸೆಂಬ್ಲಿ ಸ್ಥಾನಗಳಿಗೆ ಅಕ್ಟೋಬರ್ 1999ರಲ್ಲಿ ನಡೆಯಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ 132 ಸ್ಥಾನ ಪಡೆಯುವ ಮೂಲಕ ಮೆಜಾರಿಟಿ ಪಡೆಯಿತು. ಭಾರತೀಯ ಜನತಾ ಪಾರ್ಟಿ ಮತ್ತು ಜನತಾ ದಳ (ಯುನೈಡ್) ಗಳು ಇದ್ದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ (ಎನ್‌ಡಿಎ) 63 ಸ್ಥಾನಗಳನ್ನಷ್ಟೇ ಪಡೆಯಿತು. ಹೆಚ್‌. ಡಿ. ದೇವಗೌಡ ನೇತೃತ್ವದ ಜನತಾ ದಳ (ಜಾತ್ಯಾತೀತ) ಕೇವಲ 10 ಸ್ಥಾನಗಳನ್ನು ಪಡೆಯುವ ಮೂಲಕ ನೆಲಕಚ್ಚಿತು. ವಿಧಾನಸಭೆಯ ಚುನಾವಣೆ ಲೋಕಸಭಾ ಚುನಾವಣೆಗಳೊಂದಿಗೆ ನಡೆಯಿತು. ಹಿಂದಿನ ವಿಧಾನಸಬೆಯ ಚುನಾವಣೆಗಳು ನವೆಂಬರ್ 26 ಮತ್ತು ಡಿಸೆಂಬರ್ 1 1994 ನಡೆದಿದ್ದು ಜನತಾದಳ ಅಧಿಕಾರಕ್ಕೆ ಬಂದಿತ್ತು (ನೋಡಿ). ಆದರೆ 5 ವರುಷಗಳ ಅವಧಿ ಮುಗಿಯುವ ಮುನ್ನವೇ ಜನತಾ ದಳದ ವಿಭನೆಯಿಂದಾಗಿ ಚುನಾವಣೆ ಎದುರಿಸ ಬೇಕಾಯಿತು. ಮುಖ್ಯಮಂತ್ರಿ ಜೆ. ಹೆಚ್. ಪಟೇಲ್ ಗುಂಪು ಜನತಾ ದಳ (ಯುನೈಟೆಡ್) ಸೇರಿತು ಮತ್ತು ದೇವೇಗೌಡ ನೇತೃತ್ವದ ಜನತಾ ದಳ ಗುಂಪು ಜನತಾ ದಳ (ಜಾತ್ಯಾತೀತ) ಎಂದು ಹೆಸರು ಪಡೆಯಿತು. ಎರಡೂ ಜನತಾ ದಳಗಳ ವಿರುದ್ಧದ ಅಧಿಕಾರ ವಿರೋಧಿ ಅಲೆಯ ಪರಿಣಾಮವಾಗಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿತು ಮತ್ತು ಅಕ್ಟೋಬರ್ 11 1999ರಂದು ಎಸ್. ಎಂ. ಕೃಷ್ಣ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. == ಪಲಿತಾಂಶ == == ಆಧಾರಗಳು == 1999 2016-11-29 1994 2016-11-29 , , 16 - 16, . 31 - . 13, 1999, 2016-11-29